ಉಡುಪಿ : ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತಮಹಾಪಾಠಶಾಲೆಯಲ್ಲಿ ಕಾವ್ಯಶಾಸ್ತ್ರವಿಚಾರಪರಿಷತ್ ನ ವತಿಯಿಂದ ದಿವಂಗತ ಕುತ್ತೆತ್ತೂರು ಹಯಗ್ರೀವಾಚಾರ್ಯರ ಸಂಸ್ಮರಣಾರ್ಥ ಕುತ್ತೆತ್ತೂರು ಗೋವಿಂದದಾಸರು ಇಟ್ಟಿರುವ ದತ್ತಿನಿಧಿಯ ಪ್ರಾಯೋಜಕತ್ತ್ವದಲ್ಲಿ "ಶಾಬ್ದಬೋಧ" ವಿಷಯದ ಕುರಿತಾಗಿ ಉಪನ್ಯಾಸಕಾರ್ಯಕ್ರಮವು ನಡೆಯಿತು.
ಉಪನ್ಯಾಸಕರಾಗಿ ಆಗಮಿಸಿದ ಪಲಿಮಾರು ಯೋಗದೀಪಿಕಾ ವಿದ್ಯಾಪೀಠದ ಉಪಪ್ರಾಂಶುಪಾಲರಾದ ಡಾ.ಸುದರ್ಶನ ಸಾಮಗ ಇವರು " ಶಬ್ದದಿಂದ ಉಂಟಾಗುವ ಜ್ಞಾನವೇ ಶಾಬ್ದಬೋಧ. ಶ್ರವಣದ ಬಳಿಕ ವೃತ್ತಿಜ್ಞಾನವು ಸರಿಯಾಗಿರದಿದ್ದಲ್ಲಿ ಅನರ್ಥವು ಉಂಟಾಗುವುದು. ಈ ಕಾಲದಲ್ಲಿ ಶಾಬ್ದಬೋಧದ ಜ್ಞಾನ ಎಲ್ಲರಿಗೂ ಅತ್ಯಂತ ಅವಶ್ಯವಾದುದಾದಿದ್ದು, ಪ್ರತಿಪದಗಳ ಅರ್ಥಗಳ ಜೊತೆ ಅವುಗಳ ಪರಸ್ಪರ ಅನ್ವಯವು ಮನುಷ್ಯನ ಬುದ್ಧಿಸಾಮರ್ಥ್ಯವನ್ನು ಅವಲಂಬಿಸಿವೆ. ಹೀಗಾಗಿ ಪ್ರತಿಯೊಂದು ವಿಚಾರಗಳನ್ನು ಮೊದಲು ಸಂಪೂರ್ಣವಾಗಿ ಶ್ರವಣಮಾಡುವ ಅಭ್ಯಾಸ ಪ್ರತಿಯೋರ್ವ ವಿದ್ಯಾರ್ಥಿಯು ಅವಶ್ಯವಾಗಿ ಮಾಡಬೇಕಾದ ಕರ್ತವ್ಯ" ಎಂದು ಉಪನ್ಯಾಸಗೈದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಕೃತಮಹಾಪಾಠಶಾಲೆಯ ಪ್ರಾಚಾರ್ಯರಾದ ಪ್ರೊ.ಅಮೃತೇಶಾಚಾರ್ಯ ಡಿ.ಎಸ್ ಇವರು "ವಸ್ತುತಃ ಶಾಬ್ದಬೋಧ ಎಲ್ಲರಲ್ಲೂ ಇದ್ದೇ ಇರುತ್ತದೆ. ಪ್ರತಿಯೊಂದು ಪದಗಳ ಅರ್ಥಜ್ಞಾನವಿದ್ದರೂ ಕಾಲವನ್ನು ಆಶ್ರಯಿಸಿ ಬಳಸುವ ಪ್ರಯೋಗಗಳನ್ನು ಅರ್ಥೈಸಿದರೆ ಅನರ್ಥಗಳು ಉಂಟಾಗಲಾರದು" ಎಂದು ಹಿತನುಡಿಗಳನ್ನಾಡಿದರು.
ಅಭ್ಯಾಗತರಾಗಿ ಎಸ್.ಎಮ್.ಎಸ್.ಪಿ ಸಭೆಯ ಕಾರ್ಯದರ್ಶಿಗಳಾದ ವಿ. ಗೋಪಾಲಕೃಷ್ಣ ಜೋಯಿಸರು ಉಪನ್ಯಾಸಕರನ್ನು ಗೌರವಿಸಿದರು.
ಕಾವ್ಯಶಾಸ್ತ್ರವಿಚಾರಪರಿಷತ್ ನ ಪ್ರಮುಖರಾದ ಡಾ. ಅಜಿತಕುಮಾರ.ಪಿ ಇವರು ಸ್ವಾಗತಿಸಿದರು. ವಿ. ಸತ್ಯಮೂರ್ತಿ ಅಡಿಗ ವಂದನಾರ್ಪಣೆಗೈದರು. ಕು. ಸುದೀಕ್ಷಾ ಇವರು ಗೀತೆಯ ಮೂಲಕ ಪ್ರಾರ್ಥಿಸಿದರು. ಕು. ಸುಮುಖ ಅಡಿಗ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions