Advertisement

ವೈವಿಧ್ಯಮಯ ಆಹಾರ, ಶಾಪಿಂಗ್, ಮನರಂಜನೆ: ಮಣಿಪಾಲ್‌ನಲ್ಲಿ ಮಾನ್ಸೂನ್ ಮೇಳ

ಎಕ್ತಾ ಇವೆಂಟ್ಸ್ ಬ್ರಹ್ಮಾವರ ಹಾಗೂ ನವಕಿರಣ್‌ ನವತಾರೆ ಸೇವಾ ವೇದಿಕೆ, ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ **'ಮಣಿಪಾಲ್ ಮಾನ್ಸೂನ್ ಮೇಳ–2026'** ಜುಲೈ 24, 25 ಹಾಗೂ 26ರಂದು (ಶುಕ್ರವಾರ, ಶನಿವಾರ ಹಾಗೂ ಭಾನುವಾರ) ಮಣಿಪಾಲ್‌ನ ವೈಷ್ಣವಿ ಸಭಾ ಭವನದಲ್ಲಿ ನಡೆಯುತ್ತಲಿದೆ.

ಮುಂಗಾರು ಮಳೆಯ ಸಂಭ್ರಮದ ನಡುವೆ ನಡೆಯಲಿರುವ ಈ ಮೇಳದಲ್ಲಿ ದೇಶಿ ಹಾಗೂ ವಿದೇಶಿ ಹಣ್ಣುಗಳ ಸಂಗಮ, ಹಲಸು, ಮಾವು ಸೇರಿದಂತೆ ವಿವಿಧ ಹಣ್ಣುಗಳಿಂದ ತಯಾರಿಸಲಾದ ವಿಶೇಷ ಖಾದ್ಯಗಳು, ಮೈಸೂರು ಪಾಕ್, ಜಿಲೇಬಿ, ಹೋಳಿಗೆ, ಬಿರಿಯಾನಿ ಸೇರಿದಂತೆ ರುಚಿಕರ ಆಹಾರ ಮಳಿಗೆಗಳು ಇರಲಿವೆ.

ಅಲ್ಲದೇ ಪಜೆ ರೇಷ್ಮೆ ಸೀರೆಗಳ ವಿಶೇಷ ಮಾರಾಟ, ಕೇರಳದ ಹಲಸು ಹಾಗೂ ಮಾವಿನ ಐಸ್‌ಕ್ರೀಮ್ ಸೇರಿದಂತೆ ವಿವಿಧ ಹಣ್ಣಿನ ಐಸ್‌ಕ್ರೀಮ್‌ಗಳು, ಮಹಿಳೆಯರಿಗಾಗಿ ವಿವಿಧ ವಿನ್ಯಾಸದ ಉಡುಪುಗಳು, ಫ್ಯಾನ್ಸಿ ಆಭರಣಗಳು ಸೇರಿದಂತೆ ಹತ್ತು ಹಲವು ಆಕರ್ಷಕ ಸ್ಟಾಲ್‌ಗಳು ಮೇಳದಲ್ಲಿ ಸಾರ್ವಜನಿಕರನ್ನು ಸ್ವಾಗತಿಸಲಿವೆ.

ಮಳೆಗಾಲದ ಸಂಭ್ರಮವನ್ನು ಕುಟುಂಬ ಸಮೇತರಾಗಿ ಸವಿಯಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೇಳವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಕೋರಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions