Advertisement

ಉಡುಪಿ | ಮೇ 8 ರಿಂದ 10 ರ ವರೆಗೆ ಸಂತೆಕಟ್ಟೆಯಲ್ಲಿ ಹಲಸು-ಹಣ್ಣು ಮೇಳ

ಉಡುಪಿ: ಸಂತೆಕಟ್ಟೆ ಕೆಮ್ಮಣ್ಣು ಲಿಟ್ಸ್ ಫ್ಲವರ್ ಹಾಲ್‌ನಲ್ಲಿ ಮೇ 8ರಿಂದ 10ರವರೆಗೆ ವಿಶೇಷ ಹಲಸು ಮತ್ತು ಹಣ್ಣು ಮೇಳವನ್ನು ಆಯೋಜಿಸಲಾಗಿದೆ ಎಂದು ಮುಹಮ್ಮದ್ ಮುಕ್ತಾರ್ ಹುಸೇನ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಮೇಳದಲ್ಲಿ ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ತಳಿಯ ಹಲಸುಗಳು ಪ್ರಮುಖ ಆಕರ್ಷಣೆಯಾಗಿವೆ ಎಂದರು. ಆಂಧ್ರಪ್ರದೇಶದಿಂದ ವಿಶೇಷವಾಗಿ ತರಿಸಲಾದ ಹಲಸಿನ ಹಣ್ಣುಗಳನ್ನು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಹೇಳಿದರು.

ಇದರ ಜೊತೆಗೆ ಹಲಸಿನ ಸಂಡಿಗೆ, ಹಪ್ಪಳ, ದೋಸೆ, ಹೋಳಿಗೆ, ಜಿಲೇಬಿ ಸೇರಿದಂತೆ ವಿವಿಧ ಹಲಸಿನ ಉತ್ಪನ್ನಗಳು ಲಭ್ಯವಿರಲಿವೆ. ಮೇಳದಲ್ಲಿ 31ಕ್ಕೂ ಅಧಿಕ ಸ್ಟಾಲ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಹಲಸಿನ ಹಣ್ಣಿನ ಸ್ಟಾಲ್‌ಗಳ ಜೊತೆಗೆ ವಿವಿಧ ತಳಿಯ ಮಾವಿನ ಹಣ್ಣಿನ ಸ್ಟಾಲ್‌ಗಳೂ ಇರಲಿವೆ. ಸ್ಥಳೀಯ ಹಾಗೂ ವಿವಿಧ ಜಿಲ್ಲೆಗಳ ರುಚಿಕರ ಮಾವಿನಹಣ್ಣುಗಳು ಮೇಳದಲ್ಲಿ ದೊರೆಯಲಿವೆ ಎಂದು ತಿಳಿಸಿದರು.

ಫ್ಯಾನ್ಸಿ ವಸ್ತುಗಳು, ಬಟ್ಟೆ ಹಾಗೂ ಇತರ ಉತ್ಪನ್ನಗಳ ಸ್ಟಾಲ್‌ಗಳನ್ನೂ ಮೇಳದಲ್ಲಿ ಅಳವಡಿಸಲಾಗಿದೆ. ಪ್ರತಿದಿನ ಸಂಜೆ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಿಫಾತ್, ರಾಹಿಲ್ ಅಹಮದ್‌, ರತ್ನಾಕರ್ ಹಾಗೂ ಮುಸ್ತಫಾ ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions