ಉಡುಪಿ: ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ ಮೇ 24 ರವರೆಗೆ ಹಲಸು ಮತ್ತು ಹಣ್ಣು ಮೇಳವನ್ನು ಆಯೋಜಿಸಲಾಗಿದೆ.
ಮೇಳದಲ್ಲಿ ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ಈ ನಾಲ್ಕು ತಳಿಯ ಹಲಸು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಹಲಸಿನ ಹಣ್ಣನ್ನು ಆಂಧ್ರಪ್ರದೇಶದಿಂದ ತರಿಸಲಾಗಿದೆ. ಇದರ ಜೊತೆಗೆ ಹಲಸಿನ ಸಂಡಿಗೆ, ಹಪ್ಪಳ, ದೋಸೆ, ಹೋಳಿಗೆ, ಜಿಲೇಬಿ ಹಾಗೂ ವಿವಿಧ ಹಲಸಿನ ಉತ್ಪನ್ನಗಳ ಮಾರಾಟ ನಡೆಯಲಿದೆ.
ಈ ಮೇಳದಲ್ಲಿ ಹಲವು ಸ್ಟಾಲ್ ಗಳು ಇರಲಿದ್ದು, ಹಲಸಿನ ಹಣ್ಣಿನ ಸ್ಟಾಲ್ ಜೊತೆಗೆ ಮಾವಿನ ಹಣ್ಣು, ಕಲ್ಲಂಗಡಿ, ಫೈನಾಫಲ್ ಹಣ್ಣಿನ ಸ್ಟಾಲ್ ಇರಲಿದೆ. ಸ್ಥಳೀಯ ಹಾಗೂ ವಿವಿಧ ಜಿಲ್ಲೆಯ ರುಚಿಯಾದ ಮಾವಿನಹಣ್ಣು ಲಭ್ಯವಿರಲಿದೆ. ಫ್ಯಾನ್ಸಿ, ಬಟ್ಟೆ ಹಾಗೂ ವಿವಿಧ ಉತ್ಪನ್ನಗಳ ಸ್ಟಾಲ್ ಕೂಡ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8762113078, 9620428158 ಸಂಪರ್ಕಿಸಬಹುದಾಗಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions