ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಹೆಬ್ಬಾರ್ ಅವರನ್ನು ನಮ್ಮ ನಾಡ ಒಕ್ಕೂಟ (ಎನ್‌ಎನ್‌ಒ) ಹೆಬ್ರಿ ಘಟಕದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಬೆಳ್ವೆಯ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಅಧ್ಯಕ್ಷ ಅನ್ಸಾರ್ ಹೊಸಂಗಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್‌ಎಸ್ ಅಕಾಡೆಮಿ ಕಾರ್ಕಳದ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿಯ ಕೋಶಾಧಿಕಾರಿ ಫೀರು ಸಾಹೇಬ್ ಉಡುಪಿ, ಎನ್‌ಎನ್‌ಒ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮುನಾವರ್ ಅಜೆಕಾರು, ಲಯನ್ಸ್ ಕ್ಲಬ್ ಆರ್ಡಿ-ಬೆಳ್ವೆ-ಗೋಳಿಯಂಗಡಿ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ, ಟೀಮ್ ಮಲೆನಾಡು ಹ್ಯೂಮೇನಿಟೇರಿಯನ್ ಟ್ರಸ್ಟ್ ಬೆಳ್ವೆಯ ಅಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ, ಶ್ರೀಧರ್ ಹೆಬ್ಬಾರ್, ಅಲ್ಬಾಡಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಆನಂದ್ ಪೂಜಾರಿ, ಎನ್‌ಎನ್‌ಒ ಹೆಬ್ರಿ ಘಟಕದ ಉಪಾಧ್ಯಕ್ಷ ಶರೀಫ್ ಸಾಹೇಬ್, ಎನ್‌ಎನ್‌ಒ ಉಡುಪಿ ತಾಲೂಕು ಸದಸ್ಯ ಅಕ್ರಮ್ ಆದಿಉಡುಪಿ, ಹಳೆ ವಿದ್ಯಾರ್ಥಿ ಸಂಘದ ಅನ್ವರ್ ಹುಸೇನ್ ಅಲ್ಬಾಡಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಾಕೀಫ್ ತರಝ ಪ್ರಾರ್ಥನೆ ನೆರವೇರಿಸಿದರು. ಎನ್‌ಎನ್‌ಒ ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅರಾಫತ್ ಕಾರ್ಯಕ್ರಮ ನಿರೂಪಿಸಿದರು. ಯುವ ಸಂಘಟಕ ಮೊಹಮ್ಮದ್ ಆಸೀಫ್ ಅಲ್ಬಾಡಿ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions