ಇಸ್ಲಾಮಿಕ್ ವೆಲ್ಫೇರ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಉಡುಪಿ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.19ರಂದು ಉಡುಪಿ ಜಾಮಿಯಾ ಮಸೀದಿಯ ನೆಲಮಾಳಿಗೆಯಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ದಾನಿಶ್ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಉಪಾಧ್ಯಕ್ಷ ನಿಸಾರ್ ಅಹ್ಮದ್ ಸ್ವಾಗತಿಸಿದರು.
ನಿರ್ದೇಶಕ ರಯೀಸ್ ಅಹ್ಮದ್ ಅವರು ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆಯನ್ನು ಓದಿ ದಾಖಲಿಸಿದರು. ನಿರ್ದೇಶಕ ಅನ್ವರ್ ಅಲಿ ಕಾಪು ಅವರು 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ ದಾಖಲಿಸಿದರು. ಕಾರ್ಯದರ್ಶಿ ಆರೀಫ್ ಕಾಶೀಮ್ ಸಾಹೇಬ್ ಅವರು 2025-26ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟರು.
ನಿರ್ದೇಶಕ ಮೊಹಮ್ಮದ್ ಇಕ್ಬಾಲ್ ಕಾಪು ಅವರು 2026-27ನೇ ಸಾಲಿನ ಅಂದಾಜು ಆಯ-ವ್ಯಯ ಪತ್ರವನ್ನು ಮಂಡಿಸಿದರು. ಸಭೆಯ ಕಾರ್ಯಕ್ರಮವನ್ನು ನಿರ್ದೇಶಕ ಜಿ.ಎಂ. ಶರೀಫ್ ಹೂಡೆ ನಿರೂಪಿಸಿದರು. ಕೊನೆಯಲ್ಲಿ ಅವರು ಧನ್ಯವಾದ ಅರ್ಪಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions