ಕಾಪು: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್ (UEA) ವತಿಯಿಂದ ಮಂಗಳೂರಿನ ಉಳ್ಳಾಳದಲ್ಲಿ ಆಯೋಜಿಸಲಿರುವ *ವೈಟ್ ಸ್ಟೋನ್ ಯುಸಿಎಲ್ ಪ್ರೀಮಿಯರ್ ಕ್ರಿಕೆಟ್ ಲೀಗ್*ನಲ್ಲಿ ಭಾಗವಹಿಸಲಿರುವ ಫೇವರೇಟ್ ತಂಡಗಳಲ್ಲೊಂದಾದ ಬ್ರೈಟ್ ಓಯಸಿಸ್ ಕಾಪು ಚಾಲೆಂಜರ್ಸ್ ತಂಡದ ಆಟಗಾರರ ಜರ್ಸಿ ಅನಾವರಣ ಕಾರ್ಯಕ್ರಮವು ಕಾಪುವಿನ ಬಟರ್‌ಫ್ಲೈ ರೆಸಾರ್ಟ್‌ನಲ್ಲಿ ಇಂದು ನಡೆಯಿತು.
ಸ್ಥಳೀಯ ಹಾಗೂ ರಾಜ್ಯ ಮಟ್ಟದ ಹೆಸರಾಂತ ಆಟಗಾರರನ್ನು ಒಳಗೊಂಡಿರುವ ಕಾಪು ಚಾಲೆಂಜರ್ಸ್ ತಂಡವು ಈ ಬಾರಿ ಟೂರ್ನಿಯ ಹಾಟ್ ಫೇವರೇಟ್ ತಂಡವಾಗಿದ್ದು, ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವನ್ನು UEA ರಾಜ್ಯ ಸದಸ್ಯರು ಹಾಗೂ ಕಾಪು ಚಾಲೆಂಜರ್ಸ್ ತಂಡದ ಸಹ ಮಾಲಕರಾದ **ಶರ್ಪುದ್ದೀನ್ ಶೇಖ್** ವ್ಯಕ್ತಪಡಿಸಿದರು.
ರಾಜ್ಯದ ಪ್ರತಿಷ್ಠಿತ ತಂಡಗಳು ಈ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸುತ್ತಿದ್ದು, ಉಸ್ಮಾನ್ ಪಟೇಲ್, ಇರ್ಪಾನ್ ಪಟೇಲ್ ಸೇರಿದಂತೆ ರಾಷ್ಟ್ರಮಟ್ಟದ ಖ್ಯಾತಿಯ ಆಟಗಾರರು ವಿವಿಧ ತಂಡಗಳ ಪರವಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಯುಸಿಎಲ್ ಪ್ರೀಮಿಯರ್ ಲೀಗ್‌ಗೆ ಹೆಚ್ಚಿನ ಮೆರುಗು ಮತ್ತು ಕ್ರೀಡಾಸಕ್ತರ ನಿರೀಕ್ಷೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ತಂಡದ ಮಾಲಕರಾದ ಜನಾಬ್ ಹಾಜಿ Ln.Dr.ಶೇಖ್ ವಹೀದ್ ದಾವೂದ್ ಮಾತನಾಡಿ ಕಾಪು ತಂಡಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಂಡದ ಮಾಲಕರು,ಸಹ ಮಾಲಕರು.ಮ್ಯಾನೆಜರ್,ಮೆಂಟರ್ ಇನ್ನಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ಜರ್ಸಿ ಅನಾವರಣ ಸಮಾರಂಭದಲ್ಲಿ ತಂಡದ ಆಟಗಾರರು, ಆಯೋಜಕರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು, ಟೂರ್ನಿಗೆ ಶುಭ ಹಾರೈಸಿದರು.

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions