Advertisement

ಸುಹಾಸಂ ಹರ್ಷ ವರ್ಷ: ಹಾಸ್ಯ ರಸಾಯನದ ಬರ್ಸ

ಸುಹಾಸಂ ವತಿಯಿಂದ ಅಂಬಲಪಾಡಿ ಬೈಪಾಸ್ ಬಳಿಯ ಹೋಟೆಲ್ ಕಾರ್ತಿಕ್ ಎಸ್ಟೇಟ್ ಇದರ ಮಧುವನ ಸಭಾಂಗಣದಲ್ಲಿ ಹರ್ಷ ವರ್ಷ ಹಾಸ್ಯ ಹಬ್ಬ ಕಾರ್ಯಕ್ರಮವು ಸೋಮವಾರ ನಡೆಯಿತು.

ಗಂಗಾವತಿ ಪ್ರಾಣೇಶ್ ಉತ್ತರ ಕರ್ನಾಟಕದ ಸೊಗಡಿನ ಶುದ್ಧ ಹಾಸ್ಯದ ಮಳೆ ಸುರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಬಸವರಾಜ ಮಹಾಮನಿ, ಬಸವರಾಜ ಬೆಣ್ಣಿ ಹಳ್ಳಿ ಬದುಕು, ಸಂಬAಧ, ಆಧುನಿಕತೆಯ ಗೊಂದಲಗಳಿಗೆ ಹಾಸ್ಯ ಲೇಪನ ನೀಡಿ ಜನರ ಮನ ಮುಟ್ಟುವಂತೆ ಸೊಗಸಾಗಿ ಪ್ರಸ್ತುತಪಡಿಸಿದರು.

ಹೋಟೆಲ್ ಮಾಲೀಕ ಹಾಗೂ ಉದ್ಯಮಿ ಹರಿಯಪ್ಪ ಕೋಟ್ಯಾನ್, ರಾಜ್ಯಪಾಲರಿಂದ ಗೌರವ ಸ್ವೀಕರಿಸಿದ ಉದ್ಯಮಿ ವಿಶ್ವನಾಥ ಶೆಣೈ ಅವರನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

ಸುಹಾಸಂ ನೂತನ ಅಧ್ಯಕ್ಷೆ ಸಂಧ್ಯಾ ಶೆಣೈ ಅಧ್ಯಕ್ಷತೆ ವಹಿಸಿ, ಸಭಿಕರಿಗೆ ಕಚಗುಳಿಯಿಡುವ ತಿಳಿ ಹಾಸ್ಯದ ಪ್ರಾಸ್ತಾವಿಕ ಮಾತನ್ನಾಡಿದರು.

ನಿರ್ಮಲಾ ನಾಯಕ್ ಹಾಗೂ ಭಾಗ್ಯಲಕ್ಷಿ÷್ಮ ಉಪ್ಪೂರು ಪ್ರಾರ್ಥಿಸದಿರು. ಸುಹಾಸಂ ಕಾರ್ಯದರ್ಶಿ ಮುರಳೀಧರ್ ಸ್ವಾಗತಿಸಿ, ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು.

*ಕಿಕ್ಕಿರಿದ್ದು ಸೇರಿದ್ದ ಜನರು ಎರಡೂವರೆ ಗಂಟೆಗಳ ಕಾಲ ಹಾಸ್ಯ ರಸಾಯನವನ್ನು ಸವಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions