ಹಿರಿಯ ಸಮಾಜ ಸೇವಕ, ಉದ್ಯಮಿ ಹಾಗೂ ವಿವಿಧ ಧಾರ್ಮಿಕ ಸಂಸ್ಥೆಗಳ ಸೇವಕರಾಗಿದ್ದ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬರು ಇಂದು ನಿಧನರಾದರು.
ಉಡುಪಿ ನಗರದ ತೋನ್ಸೆ ಬೆಂಗ್ರೆಯಲ್ಲಿ 1937ರ ನವೆಂಬರ್ 6ರಂದು ಜನಿಸಿದ ಅವರು, ಕಾರ್ಕಳ ಮುನ್ಸಿಫ್ ನ್ಯಾಯಾಲಯದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಬಳಿಕ 1971ರಲ್ಲಿ ಕತಾರ್‌ನ ದೋಹಾಗೆ ತೆರಳಿ ವಾಣಿಜ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಸುಮಾರು 30 ವರ್ಷಗಳ ಕಾಲ ಮಾರ್ಸ್ ಟ್ರೇಡಿಂಗ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.
2001ರಲ್ಲಿ ಉಡುಪಿಗೆ ಮರಳಿ ನೆಲೆಸಿದ ಅವರು, ಉಡುಪಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉಡುಪಿ ಜಾಮಿಯಾ ಮಸೀದಿ ಹಾಗೂ ಕೋಡಿಬೆಂಗ್ರೆ ಜಾಮೀಯ ಮಸೀದಿಯ ಅಧ್ಯಕ್ಷರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಉಡುಪಿಯಲ್ಲಿ ಹಲವು ಏಜೆನ್ಸಿ ಹಾಗೂ ವಿತರಣಾ ವ್ಯವಹಾರಗಳನ್ನು ನಡೆಸುತ್ತಿದ್ದ ಅವರು, ಮಾರ್ಸ್ ಟ್ರೇಡರ್ಸ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಮಾಜ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು, ಅಪಾರ ಬಂಧು-ಬಳಗ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.
ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಇಶಾ ನಮಾಝ್ ಬಳಿಕ ತೋನ್ಸೆ ಖದೀಮಿ ಮಸೀದಿ, ಹೂಡೆಯಲ್ಲಿ ನಡೆಯಲಿದೆ ಎಂದು ಅವರ ಹಿರಿಯ ಪುತ್ರ ಟಿ.ಎಸ್. ಜಫರುಲ್ಲಾ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions