ಪೆಟ್ರೋಲ್-ಡಿಸೇಲ್ ನಲ್ಲಿ ಓಡಾಡುವ ವಾಹನಗಳನ್ನು ತಕ್ಷಣವೇ ನಿಲ್ಲಿಸುವುದು ಅಥವಾ ಓಡಾಟ ಕಡಿಮೆ ಮಾಡುವುದು ಅಸಾಧ್ಯವಾದ ಮಾತು ಆದರೆ ಮೋದಿಯ ಈ ಮಾತಿನ ಹಿಂದಿನ ಮರ್ಮವೇನು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ಮುಖಂಡ ನವೀನ್ ಸಾಲಿಯಾನ್ ಪ್ರಶ್ನೆ ಮಾಡಿದ್ದಾರೆ.
ಪೆಟ್ರೋಲ್ –ಡಿಸೇಲ್ ಅಭಾವದ ಕಾರಣ ನೀಡಿ ದರ ಏರಿಕೆ ಮಾಡುವ ಇದು ಒಂದು ತಂತ್ರವಾಗಿದೆ ಹಾಗೂ ಈ ರೀತಿಯಾದರೆ ದೇಶದ ಜನಜೀವನವನ್ನು ದಿನೇ ದಿನೇ ಸುಸ್ತು ಮಾಡುತ್ತದೆ. ದೇಶದಲ್ಲಿ ದುಡಿಯುವ ವರ್ಗದ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿರುವಾಗ ಪೆಟ್ರೋಲ್ ಹಾಗೂ ಡಿಸೇಲ್‌ನ ಅನಿವಾರ್ಯತೆ ದಿನೇ ದಿನೇ ಜಾಸ್ತಿಯಾಗುತ್ತಾ ಹೋಗುತ್ತಿದೆ. ಐದು ರಾಜ್ಯಗಳ ಚುನಾವಣೆ ಮಗಿದ ಬಳಿಕ ಪೆಟ್ರೋಲ್–ಡಿಸೇಲ್ ಬೆಲೆ ಏರಿಕೆ ಮಾಡಿ ಮಾಡಿ ಇದೇ ರೀತಿ ದರ ಜಾಸ್ತಿ ಮಾಡಿದರೆ ದುಡಿಯುವ ವರ್ಗವನ್ನು ಬೀದಿಯಲ್ಲಿ ಹಾಕುವುದು ಖಂಡಿತಾ. ಯುದ್ದದ ಒಂದು ಕಾರಣವನ್ನು ನೀಡಿ, ಪೆಟ್ರೋಲ್-ಡಿಸೇಲ್ ಗ್ಯಾಸ್‌ಗಳ ಬೆಲೆ ಏರಿಕೆಯನ್ನು ಮಾಡುವುದು ಖಂಡನೀಯ ಎಂದು ನವೀನ್ ಸಾಲಿಯಾನ್ ತಿಳಿಸಿದ್ದಾರೆ.
ಸಾರಿಗೆ ವಿಚಾರದಲ್ಲಿ ಯಾವುದೇ ಬಳಕೆಯನ್ನು ಕಡಿಮೆ ಮಾಡಲಾಗುವುದಿಲ್ಲ ದರ ಏರಿಕೆ ಹೀಗೆಯೇ ಮುಂದುವರಿದರೆ ತೀವ್ರವಾದ ಹೋರಾಟ ಮಾಡಲಾಗುವುದು ಎಂದು ನವೀನ್ ಸಾಲಿಯಾನ್ ಎಚ್ಚರಿಸಿದ್ದಾರೆ.
ದೇಶದ ಪ್ರಧಾನಿಗೆ ಪಕ್ಷದ ಚುನಾವಣೆಯು ಮಾತ್ರ ಗಮನದಲ್ಲಿರುವಂತಿದೆ ಜನರ ಹಿತದೃಷ್ಟಿ ಅಲ್ಲ. ಮೋದಿಯವರು ಪಕ್ಷದ ಅಭಿವೃದ್ದಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಹೊರತು ಸಾಮಾನ್ಯ ಜನರ ಅಭಿವೃದ್ದಿಗಾಗಿ ಅಲ್ಲ ಎನ್ನುದು ಸ್ಪಷ್ಟವಾಗುತ್ತಿದೆ ಎಂದು ನವೀನ್ ಸಾಲಿಯಾನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions