Advertisement

ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆ ವಿಲೇವಾರಿಗೆ “ಪ್ರಜಾಸೇವೆ” ವೇದಿಕೆ ಸಜ್ಜು

ರಾಜ್ಯ ಸರ್ಕಾರದಲ್ಲಿ ದಕ್ಷತೆ ಹೆಚ್ಚಿಸಲು, ಸಾರ್ವಜನಿಕರ ಅಹವಾಲುಗಳನ್ನು ಹಾಗೂ ಕುಂದು ಕೊರತೆಗಳನ್ನು ಒಂದೇ ಸೂರಿನಡಿ ತ್ವರಿತವಾಗಿ

ವಿಲೇವಾರಿ ಮಾಡಲು ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳನ್ನು ಸೆಪ್ಟಂಬರ್ 5 ರಿಂದ ರಾಜ್ಯದಾದ್ಯಂತ ತಾಲೂಕು

ಹಾಗೂ ಹೋಬಳಿ ಮಟ್ಟದಲ್ಲಿ ಆರಂಭಿಸಲಾಗುತ್ತಿದೆ.

ಜನಸಾಮಾನ್ಯರು ತಮ್ಮ ಸಣ್ಣ ಪುಟ್ಟ ಸಮಸ್ಯೆಗಳಿಗೆ ದಿನನಿತ್ಯ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನರ ಬಳಿಗೆ ಆಡಳಿತ ಒದಗಿಸಲು

ನಿರ್ಧರಿಸಿರುವ ಸರ್ಕಾರವು ಸೆಪ್ಟಂಬರ್ 5 ರಿಂದ ಪ್ರತೀ ಶನಿವಾರಗಳಂದು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳನ್ನು

ಆಯೋಜಿಸಲಾಗುತ್ತಿದೆ.

ಸಾರ್ವಜನಿಕರ ಹತ್ತಿರ ಇಡೀ ಆಡಳಿತ ತಂತ್ರವನ್ನು ವಿಕೇಂದ್ರೀಕರಿಸುವುದರೊAದಿಗೆ ಸಂವಿಧಾನದ ಆಶಯದಂತೆ ಜನಪರ ಸರ್ಕಾರ ನಡೆಸಲು

ಇದೊಂದು ವಿನೂತನ ಪ್ರಯೋಗವಾಗಿದೆ. ಈ ಮೂಲಕ ಅಹವಾಲುಗಳನ್ನು ನೇರವಾಗಿ ಆಲಿಸುವುದರ ಜೊತೆಗೆ, ಅರ್ಜಿಗಳ ತ್ವರಿತ ವಿಲೇವಾರಿ,

ಸ್ಥಳದಲ್ಲಿಯೇ ಸೇವೆ ನೀಡುವುದು, ಅಹವಾಲುಗಳ ನಿರಂತರ ಪರಿಶೀಲನೆ, ಅಧಿಕಾರಿಗಳ ಹೊಣೆಗಾರಿಕೆ ಮತ್ತು ನಾಗರಿಕರಿಗೆ ಪಾರದರ್ಶಕ ವರದಿ ನೀಡುವ

ವ್ಯವಸ್ಥೆಯನ್ನು ಖಚಿತಪಡಿಸುವುದು ಈ ಸಭೆಗಳ ಮೂಲ ಉದ್ದೇಶವಾಗಿದೆ.

ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯಲಿದೆ.

ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು/ ಹೋಬಳಿ ಮಟ್ಟದಲ್ಲಿ ಸಭೆಯನ್ನು

ಆಯೋಜಿಸಲಾಗುತ್ತದೆ. ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ನಿಯಮಾನುಸಾರ ಸ್ಥಳದಲ್ಲೇ ತುರ್ತು ಪರಿಹಾರ ಒದಗಿಸಲು

ಅಧಿಕಾರಿಗಳು ಮುಂದಾಗಲಿದ್ದಾರೆ.

ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಯುವ ಸಂದರ್ಭದಲ್ಲಿ ಅದೇ ದಿನ ಆ

ಕ್ಷೇತ್ರದಲ್ಲಿ ಪ್ರತ್ಯೇಕ ಹೋಬಳಿ ಮಟ್ಟದ ಶಾಸಕರ ಸಭೆಯನ್ನು ನಡೆಸಲಾಗುವುದಿಲ್ಲ. ಬದಲಾಗಿ, ಸಂಬAಧಿಸಿದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ

ಸಭೆಯಲ್ಲಿ ಭಾಗವಹಿಸುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಭೆಗಳಿಗೆ ಸಂಬAಧಿಸಿದ ತಾಲೂಕು ಅಧಿಕಾರಿಗಳೊಂದಿಗೆ

ಹಾಜರಾಗುತ್ತಾರೆ. ಅದೇ ರೀತಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಾಲೂಕು ಒಳಪಡುವ ಕ್ಷೇತ್ರದಲ್ಲಿ ನಡೆಯುವ ಶಾಸಕರ ಸಭೆಗಳಲ್ಲಿ

ಭಾಗವಹಿಸುತ್ತಾರೆ.

ಪ್ರಜಾಸೇವೆ ಆಂದೋಲನ ಸಭೆಗಳು ನಡೆಯುವ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಸಂಬAಧಪಟ್ಟ ಕ್ಷೇತ್ರ ಮಟ್ಟದ

ಅಧಿಕಾರಿಗಳು ಮನೆ-ಮನೆಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ತಲುಪಿಸಲಿದ್ದಾರೆ. ಈ ಕರಪತ್ರಗಳು ಪೂರ್ವಮುದ್ರಿತ ಅರ್ಜಿ ನಮೂನೆ ಹಾಗೂ ಅಗತ್ಯ

ದಾಖಲೆಗಳ ಪರಿಶೀಲನಾ ಪಟ್ಟಿಯನ್ನು ಒಳಗೊಂಡಿರುತ್ತದೆ.

ಸಾರ್ವಜನಿಕರು ತಮ್ಮ ಅಹವಾಲುಗಳಿಗೆ ಸಂಬAಧಿಸಿದ ಅರ್ಜಿಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿಯೇ ಸಲ್ಲಿಸಲು ಅವಕಾಶ

ಕಲ್ಪಿಸಲಾಗುತ್ತದೆ. ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ಸ್ಥಳದಲ್ಲಿ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ, ಕಂಪ್ಯೂಟರ್ ಲ್ಯಾಪ್‌ಟಾಪ್, ಪ್ರಿಂಟರ್

ಹಾಗೂ ಇಂಟರ್ನೆಟ್ ಸೌಲಭ್ಯಗಳನ್ನು ಕಲ್ಪಿಸಿ, ಸಾರ್ವಜನಿಕರಿಗೆ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸಲು ವ್ಯವಸ್ಥೆ

ಮಾಡಲಾಗಿರುತ್ತದೆ. ಜೊತೆಗೆ ಅವರ ಮನವಿ/ ಅರ್ಜಿಗಳ ನೈಜ-ಸಮಯದ ಸ್ಥಿತಿ ಗತಿ ತಿಳಿಯುವ ವ್ಯವಸ್ಥೆಯನ್ನು ಕಲ್ಪಿಸುವುದರೊಂದಿಗೆ ಅರ್ಜಿದಾರರು

ತಮ್ಮ ಅರ್ಜಿಗಳ ಪ್ರಗತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ.

ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ನಂತರ ಸಭೆಯ ಸಂಪೂರ್ಣ ವಿವರಗಳನ್ನು ಸ್ಥಳದಲ್ಲಿಯೇ

hಣಣಠಿs://iಠಿgಡಿs.ಞಚಿಡಿಟಿಚಿಣಚಿಞಚಿ.gov.iಟಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಪ್ರಜಾಸೇವಾ ಅಭಿಯಾನ ಸಭೆಗಳಲ್ಲಿ

ಸ್ವೀಕರಿಸಲಾದ ಎಲ್ಲಾ ಅರ್ಜಿಗಳು ಮತ್ತು ಅಹವಾಲುಗಳನ್ನು ಒಂದೇ ಸಾಮಾನ್ಯ ವಾರದಲ್ಲಿ ವ್ಯವಸ್ಥಿತವಾಗಿ ಪರಿಶೀಲಿಸಲಾಗುತ್ತದೆ. ಈ

ಪರಿಶೀಲನೆಯನ್ನು ಪ್ರತಿ ಬುಧವಾರ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ .ಬೆಳಗ್ಗೆ 9 ಗಂಟೆಯಿAದ 11 ಗಂಟೆಯ ವರೆಗೆ ತಾಲೂಕು ಮಟ್ಟದ ಪರಿಶೀಲನೆ

ನಡೆಯಲಿದೆ. ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಹಂತದಲ್ಲಿ ಸ್ವೀಕರಿಸಿದ ಅರ್ಜಿಗಳು ಮತ್ತು

ಅಹವಾಲುಗಳ ಸ್ಥಿತಿಯನ್ನು ತಮ್ಮ ಅಧಿಕಾರಿಗಳೊಂದಿಗೆ ತಂತ್ರಾAಶಗಳನ್ನು ಬಳಸಿ ಅವರ ಹಂತದಲ್ಲಿ ನಿವಾರಣೆ ಆಗದೆ ಇರುವ ಅರ್ಜಿಗಳನ್ನು

ಉಪವಿಭಾಗಾಧಿಕಾರಿಗಳಿಗೆ ಇ-ಕಛೇರಿ ಮೂಲಕ ಮಂಡಿಸುತ್ತಾರೆ.

ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟೆಯ ವರೆಗೆ ಉಪವಿಭಾಗ ಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. ಉಪವಿಭಾಗದ ಸಹಾಯಕ

ಆಯುಕ್ತರು ತಾಲೂಕು ಮಟ್ಟದಿಂದ ಬಂದ ಮಾಹಿತಿಯನ್ನು ಕ್ರೋಢೀಕರಿಸಿ ಪರಿಶೀಲಿಸುತ್ತಾರೆ. ತಮ್ಮ ಹಂತದಲ್ಲಿ ನಿವಾರಣೆ ಆಗದೆ ಇರುವ

ವಿಷಯ/ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತಾರೆ. ಮಧ್ಯಾಹ್ನ 3 ಗಂಟೆಯಿAದ ಸಂಜೆ 5 ಗಂಟೆಯ ವರೆಗೆ ಜಿಲ್ಲಾ ಮಟ್ಟದ ಪರಿಶೀಲನೆ

ನಡೆಸಲಾಗುತ್ತದೆ. ಜಿಲ್ಲಾಧಿಕಾರಿಗಳು ಉಪವಿಭಾಗ ಮಟ್ಟದಿಂದ ಬಂದ ಮಾಹಿತಿಯನ್ನು ಕ್ರೋಢೀಕರಿಸಿ ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸುತ್ತಾರೆ.

ಜಿಲ್ಲಾಧಿಕಾರಿಗಳು ಅಗತ್ಯವಿದ್ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಖುದ್ದಾಗಿ ಹಾಜರಾಗುವಂತೆ ಸೂಚಿಸಬಹುದು. ಉಪವಿಭಾಗ ಹಾಗೂ ತಾಲೂಕು

ಮಟ್ಟದ ಅಧಿಕಾರಿಗಳಿಗೆ ವೀಡಿಯೋ ಅಥವಾ ಆಡಿಯೋ ಕಾನ್ಸರೆನ್ಸ್ ಮೂಲಕ ಭಾಗವಹಿಸಲು ಅವಕಾಶ ನೀಡಬಹುದು. ಪ್ರತಿ ಹಂತದಲ್ಲಿಯೂ

ಪರಿಹಾರದ ಬಗ್ಗೆ ಅಸಮಾಧಾನ ಹೊಂದಿರುವ ಸಾರ್ವಜನಿಕರು ಸಂಬAಧಿಸಿದ ಅಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ಅಹವಾಲನ್ನು

ಮಂಡಿಸಲು ಅವಕಾಶವಿರುತ್ತದೆ

ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪಿಸಿರುವ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಪ್ರಜಾಸೇವೆ ಆಗಿದ್ದು, ಇದು ಸಾರ್ವಜನಿಕರು

ತಮ್ಮ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಸೃಷ್ಟಿಯಾಗುತ್ತಿರುವ ಹೊಸ ವೇದಿಕೆಯಾಗಿದೆ.

ಅದರಂತೆ ನಮ್ಮ ಜಿಲ್ಲೆಯಲ್ಲಿಯೂ ಸಹ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯು ಸೆಪ್ಟಂಬರ್ 5 ರಂದು ಬೆಳಗ್ಗೆ 10.30 ಕ್ಕೆ

ಕಾರ್ಕಳ ತಾಲೂಕು ಕಸ್ಬಾ ಗ್ರಾಮದ ಮಂಜುನಾಥ ಪೈ ಸಭಾಭವನದಲ್ಲಿ, ರಾಜ್ಯ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ

ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಸಭೆಯ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ

ಶಾಸಕ ವಿ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ಮತ್ತು ಹೋಬಳಿ ಮಟ್ಟದಲ್ಲಿಯೂ ಸಹ ಅದೇ ದಿನದ ಬೆಳಗ್ಗೆ 10.30 ಕ್ಕೆ ಕೋಟ ಹೋಬಳಿಗೆ

ಸಂಬAಧಿಸಿದAತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ, ಬೈಂದೂರು

ಹೋಬಳಿಗೆ ಸಂಬAಧಿಸಿದAತೆ ಕಿರಿಮಂಜೇಶ್ವರ ನಾಗೂರು ಮಹಾಲಸ ಕನ್ವೇಶನ್ ಹಾಲ್‌ನಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ

ಅಧ್ಯಕ್ಷತೆಯಲ್ಲಿ, ಮಜೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಹಾಗೂ ಕಡೆಕಾರು ಗ್ರಾಮದ

ಬಿಲ್ಲವರ ಸೇವಾ ಸಂಘದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳು ನಡೆಯಲಿವೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಅಹವಾಲು, ಕುಂದುಕೊರತೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು

ಅವಕಾಶವಿದ್ದು, ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions