Advertisement

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಾಮಾನ್ಯ ಜನರ ದುಡಿಮೆಯನ್ನು ಕಂತುಗಳಲ್ಲಿ ಲೂಟಿ - ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಇದ್ರಿಸ್ ಹೂಡೆ ಆಕ್ರೋಶ

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಾಮಾನ್ಯ ಜನರ ದುಡಿಮೆಯನ್ನು 'ಕಂತುಗಳಲ್ಲಿ ಲೂಟಿ ಮಾಡಲಾಗುತ್ತಿದೆ'. ಹತ್ತು ದಿನದಲ್ಲಿ ಐದು ರೂಪಾಯಿ ಏರಿಕೆ ಮಾಡಿರುವುದು ಕೇಂದ್ರ ಸರಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆಯೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಉಡುಪಿ ಜಿಲ್ಲಾ ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶನಿವಾರ ಮತ್ತೆ ಲೀಟರ್‌ಗೆ 91 ಪೈಸೆವರೆಗೆ ಏರಿಕೆಯಾಗಿದ್ದು, ಇದು ಕಳೆದ 10 ದಿನಗಳಲ್ಲಿ ನಡೆದಿರುವ ಮೂರನೇ ಹೆಚ್ಚಳವಾಗಿದೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿದ್ದಾಗಲೂ ಅದರ ಆರ್ಥಿಕ ಲಾಭವನ್ನು ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ವರ್ಗಾಯಿಸದೆ ವಂಚಿಸಿದೆ ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯವೇ ಈ ಪರಿಸ್ಥಿತಿಗೆ ಕಾರಣ. ಪೆಟ್ರೋಲ್ ಬೆಲೆ ಈಗ ಮತ್ತೆ 100 ರೂಪಾಯಿ ಗಡಿ ದಾಟಿದೆ ಎಂದು ಆಕ್ರೋಶ ಹೊರಹಾಕಿರುವ ವೆಲ್ಫೇರ್ ಪಾರ್ಟಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿದಿನ ಬರೋಬ್ಬರಿ 1,000 ಕೋಟಿ ರೂಪಾಯಿ ಕೇಂದ್ರ ತೆರಿಗೆ ವಿಧಿಸುತ್ತಿದ್ದರೂ ಬಿಜೆಪಿಯ ಹಸಿವು ತೀರುತ್ತಿಲ್ಲ. ಜಾಗತಿಕವಾಗಿ ತೈಲ ಬೆಲೆ ಕಡಿಮೆ ಇದ್ದಾಗ ಇವರು ಜನರಿಗೆ ರಿಯಾಯಿತಿ ನೀಡಲಿಲ್ಲ. ಬದಲಿಗೆ ನಿರಂತರವಾಗಿ ಸುಲಿಗೆ ಮಾಡಿದರು. ಈಗ ಬಿಕ್ಕಟ್ಟು ಎದುರಾದಾಗ ಚುನಾವಣೆಗಳಲ್ಲಿ ಮುಳುಗಿ, ಚುನಾವಣೆ ಮುಗಿದ ಮೇಲೆ ಜನರಿಗೆ ತ್ಯಾಗದ ಪಾಠ ಬೋಧಿಸುತ್ತಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions