Advertisement

ರೋಟರಿ–ಇನರ್‌ವೀಲ್ ಕ್ಲಬ್ ವತಿಯಿಂದ ಅಂಗದಾನ ಜಾಗೃತಿ ಕಾರ್ಯಕ್ರಮ

ಮಣಿಪಾಲದ ರೋಟರಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ “ದೇಹ, ಅಂಗ ಮತ್ತು ಚರ್ಮ ದಾನ” ಕುರಿತ ಜಾಗೃತಿ ಉಪನ್ಯಾಸ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಅಂಗದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿತು.

ರೋಟರಿ ಕ್ಲಬ್ ಮಣಿಪಾಲ, ಇನ್ನರ್ ವೀಲ್ ಕ್ಲಬ್ ಹಾಗೂ ಪಡುಬಿದ್ರಿಯ ಸುಧಾ ಎಸ್ ಶೆಟ್ಟಿ ಅವರ ಕುಟುಂಬದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಡಾ. ಆರ್ ಹುಬನ್ ಥಾಮಸ್ ಅವರು ದೇಹದಾನ, ಅಂಗದಾನ ಮತ್ತು ಚರ್ಮದಾನದ ಅಗತ್ಯತೆ, ಅದರ ಸಾಮಾಜಿಕ ಮಹತ್ವ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ರೋಗಿಗಳ ಚಿಕಿತ್ಸೆಯಲ್ಲಿ ಅವುಗಳ ಪಾತ್ರದ ಕುರಿತು ವಿವರವಾಗಿ ಮಾತನಾಡಿದರು. ದಾನ ಮಾಡುವ ಮೂಲಕ ಅನೇಕ ಜೀವಗಳಿಗೆ ಆಶಾಕಿರಣವಾಗಬಹುದು ಎಂದು ಅವರು ಹೇಳಿದರು.

ಅಂಗದಾನ ಕುರಿತಾಗಿ ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಅಗತ್ಯವಿದ್ದು, ಯುವಜನರು ಮತ್ತು ಕುಟುಂಬಗಳು ಈ ಕುರಿತು ಹೆಚ್ಚಿನ ಅರಿವು ಹೊಂದಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪಡುಬಿದ್ರಿಯ ಸುಧಾ ಎಸ್ ಶೆಟ್ಟಿ ಅವರ ಕುಟುಂಬದ ಪರವಾಗಿ ಉಷಾ ಶೆಟ್ಟಿಯವರು ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷೆ ಶಶಿಕಲಾ ರಾಜವರ್ಮ ವಹಿಸಿದ್ದರು, ಇನ್ನರ್ ವೀಲ್ ಕ್ಲಬ್ ಉಡುಪಿ ಅಧ್ಯಕ್ಷೆ ಶಾಲಿನಿ ರಾಘವೇಂದ್ರ, ಕಾರ್ಯದರ್ಶಿ ಶೈಲಾ ಆರ್ ಮಯ್ಯ, ರೋಟರಿ ಕ್ಲಬ್ ಉಡುಪಿ ಕಾರ್ಯದರ್ಶಿ ವಾಣಿಶ್ರೀ, ದೀಪಾ ಭಂಡಾರಿ, ನೌಶಾ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೋಟರಿ ಹಾಗೂ ಇನರ್‌ವೀಲ್ ಸದಸ್ಯರು, ವೈದ್ಯಕೀಯ ಕ್ಷೇತ್ರದ ಆಸಕ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಉಪನ್ಯಾಸದ ಪ್ರಯೋಜನ ಪಡೆದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions