Advertisement

“ಅಕ್ರಮ ದಾರಿಯಲ್ಲಿ ಶಾಸಕರಾದ” ಶೃಂಗೇರಿ ಮಾಜಿ ಶಾಸಕ ಜೀವರಾಜ್ ವಿರುದ್ಧ ನಾಗೇಂದ್ರ ಪುತ್ರನ್ ಆಕ್ರೋಶ

ಅಕ್ರಮ ಮಾರ್ಗದ ಮೂಲಕ ಶಾಸಕರಾಗಿರುವ ಶೃಂಗೇರಿ ಮಾಜಿ ಶಾಸಕ ಜೀವರಾಜ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷೇತ್ರದ ಜನತೆಯ ಬಳಿ ಕ್ಷಮೆ ಕೇಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.

“ಅಧಿಕಾರಕ್ಕಾಗಿ ಈ ರೀತಿಯಾಗಿ ತಲೆ ಹಿಡಿಯುವ ಕೆಲಸ ಕರ್ನಾಟಕ ರಾಜಕೀಯದಲ್ಲಿ ಯಾರೂ ಮಾಡಿಲ್ಲ. ಇಂದು ಡಬ್ಬಿ ಒಡೆಸಿರುವ ಜೀವರಾಜ್ ಅವರು ರಾಜಕೀಯಕ್ಕಾಗಿ ಎಷ್ಟು ಕೆಳಮಟ್ಟಕ್ಕೂ ಇಳಿಯಬಹುದು ಎಂಬುದು ಸ್ಪಷ್ಟವಾಗಿದೆ. ಅವರಿಗೆ ಬೇಕಾಗಿರುವುದು ಶಾಸಕ ಸ್ಥಾನ ಮಾತ್ರ,” ಎಂದು ಅವರು ಆರೋಪಿಸಿದ್ದಾರೆ.

“ಮತ ಡಕಾಯಿತಿ ನಡೆದಿದೆ ಎಂಬುದನ್ನು ಬಿಜೆಪಿ ಏಜೆಂಟರೇ ದೇವರ ಮುಂದೆ ಸ್ಪಷ್ಟಪಡಿಸಿದ್ದಾರೆ. ಕೂಡಲೇ ಜೀವರಾಜ್ ಅವರನ್ನು ಬಂಧಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು. ಯಾವುದೇ ರಾಜಕೀಯ ಪ್ರಭಾವ ತನಿಖಾಧಿಕಾರಿಗಳ ಮೇಲೆ ಬೀಳದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದ್ದಾರೆ.

ಇನ್ನೂ ಲೋಕಸಭಾ ಸದಸ್ಯರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, “ಮೊನ್ನೆ ಲೋಕಸಭಾ ಸದಸ್ಯರು ‘ಜೀವರಾಜ್ ನನ್ನ ಸ್ನೇಹಿತ’ ಎಂದು ಹೇಳಿದ್ದಾರೆ. ಆದರೆ ಸ್ನೇಹಿತನ ಈ ಡಕಾಯಿತಿಗೆ ಸರಳ ಸಜ್ಜನ ಸಂಸದರು ಬೆಂಬಲ ನೀಡಬಾರದು. ಇತ್ತೀಚೆಗೆ ಅವರು ಮಾಡುತ್ತಿರುವ ಕೆಲಸಗಳ ಬಗ್ಗೆ ನಮಗೆ ಗೌರವ ಇದೆ,” ಎಂದಿದ್ದಾರೆ.

“ಚುನಾವಣೆಯಲ್ಲಿ ಸೋತ ಬಳಿಕ ಮುಂದಿನ ಚುನಾವಣೆಗೆ ಸಿದ್ಧರಾಗಬೇಕು. ಅದನ್ನು ಬಿಟ್ಟು ಡಕಾಯಿತಿ ಮೂಲಕ ವಿಧಾನಸಭೆಗೆ ಹೋಗುವ ಪ್ರಯತ್ನ ಜೀವರಾಜ್ ಅವರಿಗೆ ಶೋಭೆ ತರುವುದಿಲ್ಲ,” ಎಂದು ಕೋಟ ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions