Advertisement

ಕಾಪು | ಜಮೀಯತುಲ್ ಫಲಾಹ್ ಕಾಪು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಜಮೀಯತುಲ್ ಫಲಾಹ್ ಕಾಪು ಘಟಕದ ವತಿಯಿಂದ, ಕಾಪು ತಾಲೂಕಿಗೆ ಸಂಬಂಧ ಪಟ್ಟ ಝಕಾತ್ ಪಡೆಯಲು ಅರ್ಹರಾದ, ಪ್ರಥಮ ಪಿ. ಯು. ಸಿ ಮತ್ತು ಉನ್ನತ ತರಗತಿಯ ಎಂಬತ್ತ ಎಂಟು ವಿದ್ಯಾರ್ಥಿಗಳಿಗೆ ಹಾಗೂ 7 ರೋಗಿಗಳ ಚಿಕಿತ್ಸೆಗೆ ಒಟ್ಟು ಎರಡು ಲಕ್ಷದ ಮೂವತ್ತ ಎರಡು ಸಾವಿರ ರೂಪಾಯಿ ಯನ್ನು ಇಂದು ಕಾಪು ಕೆ. ಒನ್ ಹೋಟೆಲ್ ನಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೊಲೀಸ್ ಇಲಾಖೆಯ ಕ್ರೈಮ್ ವಿಭಾಗದ ಜನಾಬ್ ಅಬ್ದುಲ್ ರಜಾಕ್ ರವರು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಉದ್ದೇಶಿಸಿ, ಇಂದಿನ ದಿನಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂದು ಇಂತಹ ಸಂಸ್ಥೆಗಳು ತುಂಬಾ ಪರಿಶ್ರಮಿಸುತ್ತವೆ. ಇವರು ನೀಡಿದ ವಿದ್ಯಾರ್ಥಿ ವೇತನವನ್ನು ಪಡೆದ ನೀವುಗಳು ಉನ್ನತವಾದ ವಿದ್ಯಾಭ್ಯಾಸ ಪಡೆದು, ಉನ್ನತ ಹುದ್ದೆಯನ್ನು ಗಳಿಸಿ, ಈ ದೇಶದ ಸಂವಿಧಾನ ಒದಗಿಸಿ ಕೊಟ್ಟ ಮೇರೆಯೊಳಗೆ ಬದುಕು ಸಾಗಿಸುತ್ತಾ, ನೀವುಗಳು ಕೂಡಾ ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು.

ಇಂದಿನ ಕಾಲದಲ್ಲಿ ಯುವಕರು, ಯುವತಿಯರು, ಮಹಿಳೆಯರು ತಪ್ಪು ದಾರಿಗೆ ಇಳಿಯದೇ, ದುಶ್ಚಟ ಗಳಿಗೆ ಬಲಿಯಾಗದೆ, ಕೆಡುಕಿನೆಡೆಗೆ ವಾಲದೆ, ಜಾಗೃತರಾಗಿದ್ದರೆ, ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು.

ಸಮಾಜದಲ್ಲಿ ಒಳಿತಿನ ಕೆಲಸಗಳನ್ನು ಮಾಡುವವರೊಂದಿಗೆ ಗೆಳೆತನ ಮಾಡಬೇಕು. ಅನ್ಯತಾ ಕೆಡುಕುಗಳ ದಾಸರಾದರೆ, ಸಮಾಜ ಕಂಟ್ಟಕರಾಗಿ ಮನೆಯರಿಗೂ, ಸಮಾಜಕ್ಕೂ, ದೇಶಕ್ಕೂ ಬೇಡದವರಾಗಿ ತಮ್ಮ ಜೀವನವನ್ನು ನಷ್ಟ ಮಾಡಿಕೊಂಡ್ಡು, ಮೂಲೆಗೆ ತಳ್ಳಲ್ಪಡುವರು ಆಗುತ್ತೀರಿ. ಹಾಗೆ ನೀವು ಆಗಬಾರದು ಎಂದು ಕಿವಿಮಾತು ಹೇಳಿದರು.

ಹಾಗೆಯೇ ಮುಖ್ಯ ಅತಿಥಿಗಳಾದ ಅಲ್ ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ಉದ್ಯಾವರ ಮಾತಾಡುತ್ತಾ, ಮುಸ್ಲಿಮ್ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಹಲವು ಅವಕಾಶಗಳು ಇವೆ. ಅದನ್ನು ಅವರು ಸದುಪಯೋಗ ಪಡಿಸಿಕೊಳ್ಳಬೇಕು. ಮತ್ತು ಉತ್ತಮ ಪ್ರಜೆಗಳಾಗಿ ಮಾರ್ಪಡಬೇಕು ಎಂದರು. ಮತ್ತೊರ್ವ ಮುಖ್ಯ ಅತಿಥಿಯಾಗಿರುವ, ಜಮೀಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷರು ಆದ ಜನಾಬ್ ಮುಹಮ್ಮದ್ ಅಶ್ಫಾಕ್ ಸಾಹೇಬರು ಸ್ವಾತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಸಚಿವರು ಮೌಲಾನ ಅಬ್ದುಲ್ ಕಲಾಂ ರವಾಗಿದ್ದರು. ಇಂತಹ ಮೇಧಾವಿಗಳು ಮುಸ್ಲಿಮ್ ಸಮಾಜದಲ್ಲಿ ಇದ್ದಿದ್ದು, ಇನ್ನು ಮುಂದಕ್ಕೂ ಇಂತಹ ವ್ಯಕ್ತಿಗಳು ನಮ್ಮ ಸಮುದಾಯದಲ್ಲಿ ಬರಬೇಕು. ಮುಸ್ಲಿಮರು ಈ ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಇಂದಿನ ಪೀಳಿಗೆ ಉನ್ನತ ವಿದ್ಯಾಭ್ಯಾಸ ಪಡೆದು, ಅದನ್ನು ನೆನಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಕಾಪು ಘಟಕದ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ ರವರು ಮಾತಾಡುತ್ತಾ, ಈ ವಿದ್ಯಾರ್ಥಿ ವೇತನ ಝಕಾತ್ ಹಣದಿಂದ ನೀಡುತ್ತಿರುವುದು, ಅದನ್ನು ಪಡೆಯಲು ಅರ್ಹರಿದ್ದವರು ಮಾತ್ರ ಪಡೆಯಬೇಕು ಎಂದು ಹೇಳಿದರು.

ಧರ್ಮ ಗುರುಗಳಾದ, ಮೌಲಾನ ಮುಹಮ್ಮದ್ ಪರ್ವೀಜ್ ಅಲಾಮ್ ನದ್ವಿ ಯವರ ಕುರ್ ಪಠನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಧಾನ ಕಾರ್ಯದರ್ಶಿ ಶಬೀಹ್ ಅಹಮದ್ ಕಾಝಿ ಯವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಕೋಶಾಧಿಕಾರಿ ನಸೀರ್ ಅಹಮದ್ ಎಕ್ಕಾವನ್ ರವರು ಧನ್ಯವಾದ ಸಲ್ಲಿಸಿದರು. ಉಪಾಧ್ಯಕ್ಷರು ಆದ ಅನ್ವರ್ ಅಲಿ ಕಾಪು ರವರು ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಉಪಾಧ್ಯಕ್ಷರು ಬುಡನ್ ಸಾಹೇಬ್ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿದರು. ಕಾರ್ಯಕ್ರಮದಲ್ಲಿ, ಸಂಸ್ಥೆಯ ಸದಸ್ಯರುಗಳಾದ ಸಿರಾಜ್ ಕಾಝಿ, ಮುಹಮ್ಮದ್ ಸಾದಿಕ್ ದಿನಾರ್, ಮುಸ್ತಾಕ್ ಇಬ್ರಾಹೀಮ್, ಮುಹಮ್ಮದ್ ಸಲೀಮ್ ಅಜೀಜ್, ಮುಹಮ್ಮದ್ ಇಬ್ರಾಹೀಮ್ ಪೈಲ್ವಾನ್, ಬಷೀರ್ ಅಹಮದ್, ಅಬ್ದುಲ್ ಹಮೀದ್ ಪಡುಬಿದ್ರಿ, ಝೋಹರ್ ಹುಸೈನ್ ಪಡುಬಿದ್ರಿ ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions