ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲೆ ವತಿಯಿಂದ 2026-27ನೇ ಸಾಲಿನ ಉಡುಪಿ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಘಟಕಗಳ ನೂತನ ಸಮಿತಿಯ ಪದಗ್ರಹಣ ಮತ್ತು ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವು ಮೇ 17ರಂದು ಉಡುಪಿಯ ಹೋಟೆಲ್ ಮಣಿಪಾಲ್ ಇನ್‌ನಲ್ಲಿ ನಡೆಯಿತು.
ಝಫ್ರುಲ್ಲಾಹ್ ಹೂಡೆ ಅವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮವು ರೆಹಾನ್ ಬೆಳ್ವೆ ಅವರ ಕಿರಾತ್‌ನೊಂದಿಗೆ ಆರಂಭವಾಯಿತು. ಜಹೀರ್ ನಖುದಾ ಸ್ವಾಗತಿಸಿದರು. ಬಳಿಕ ನಿಹಾರ್ ಅಹ್ಮದ್ ಕುಂದಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ನಾಡ ಒಕ್ಕೂಟದ ಸ್ಥಾಪನೆ, ಸಾಧನೆ ಹಾಗೂ ನಡೆದು ಬಂದ ಹಾದಿಯ ಕುರಿತು ವಿವರಿಸಿದರು.
ವಕೀಲ ಮೊಹಮ್ಮದ್ ಸುಹಾನ್ ನಾಯಕತ್ವದ ಮಹತ್ವದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ನಿರ್ಗಮಿತ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಬೆಲ್ವೆ ಅವರು ನೂತನ ಅಧ್ಯಕ್ಷ ನಕ್ವಾ ಯಾಹ್ಯಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಕೇಂದ್ರ ಸಮಿತಿಯ ನೂತನ ಅಧ್ಯಕ್ಷ ಡಾ. ರಿಜ್ವಾನ್ ಅಹ್ಮದ್ ಸಭೆಯನ್ನುದ್ದೇಶಿಸಿ ಮಾತನಾಡಿ ಸಂಘಟನೆಯ ಬಲವರ್ಧನೆಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು. ಮಾಜಿ ಅಧ್ಯಕ್ಷ ಮುಹಮ್ಮದ್ ಸಲೀಂ ಹಾಗೂ ಟ್ರಸ್ಟಿ ಮುಷ್ತಾಕ್ ಅಹ್ಮದ್ ಬೆಲ್ವೆ ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಟ್ರಸ್ಟಿಗಳಾದ ಪೀರು ಭಾಯ್ ಮತ್ತು ಹಮೀದ್ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ನಜೀರ್ ನೆಜಾರ್, ಮೊಹಮ್ಮದ್ ರಫೀಕ್ ಗಂಗೊಳ್ಳಿ, ಹರೂನ್ ರಶೀದ್ ಶಾಸ್ತಾನ್, ಮಮ್ದು ಇಬ್ರಾಹಿಂ ಸಾಹೇಬ್, ಮೊಹಮ್ಮದ್ ಇರ್ಫಾನ್ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರಾದ ಇಬಾದ್ ಉಸ್ಮಾನ್, ಜಮಾಲ್ ಗುಲ್ವಾಡಿ, ಸಯ್ಯದ್ ಅಜ್ಮಿಲ್, ಅನ್ಸಾರ್ ಹೊಸಂಗಡಿ, ಶಾಕಿರ್ ಹಾವಂಜೆ, ಮೊಹಮ್ಮದ್ ಮುಸ್ತಫಾ ಮತ್ತು ಜಿಲ್ಲಾ ಕಾರ್ಯದರ್ಶಿ ಫಾಜಿಲ್ ಆದಿ ಉಡುಪಿ ಉಪಸ್ಥಿತರಿದ್ದರು. ಅಬ್ಬು ಮೊಹಮ್ಮದ್ ಕುಂದಾಪುರ ವಂದಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions