ಕಳೆದ ತಿಂಗಳು ನಡೆದ ಐದು ರಾಜ್ಯಗಳ ಚುನಾವಣೆ ಕರ್ನಾಟಕ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಮೋದಿ ಮತ್ತು ಬಿಜೆಪಿಯವರನ್ನು ಜನಸಾಮಾನ್ಯರು ಸಂಪೂರ್ಣವಾಗಿ ನಿರ್ಲಕ್ಷಿಸಿರುತ್ತಾರೆ.
ಕೇಂದ್ರ ಸರಕಾರದ ಮೋದಿ ಆಡಳಿತದ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಮಾಡುತ್ತಿರುವ ಅನ್ಯಾಯ ಸುಳ್ಳು ಹೇಳಿಕೆಗಳಿಂದ ಜನಸಾಮಾನ್ಯರನ್ನು ಮೋಸಗೊಳಿಸುತ್ತಿರುವ ಈ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ದಕ್ಷಿಣ ಭಾರತದ ಜನಸಾಮಾನ್ಯರು ಸಂಪೂರ್ಣವಾಗಿ ಅವರನ್ನು ನಿರ್ಲಕ್ಷಿಸಿ ಬಿಜೆಪಿ ವಿರುದ್ಧವೇ ಮತ ಚಲಾಯಿಸಿರುತ್ತಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲವನ್ನು ಕರ್ನಾಟಕದ ರಾಜ್ಯದ ಜನತೆ ನೀಡಿದೆ. ಅದಕ್ಕೆ ಸಾಕ್ಷಿ ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ. ಮತ್ತು ಆ ಗೆಲುವು ನರೇಂದ್ರ ಮೋದಿಯವರು ಕಳೆದ 12 ವರ್ಷಗಳಿಂದ ದೇಶದಲ್ಲಿ ಹಿಂದುತ್ವ ಹೆಸರಲ್ಲಿ ದೇಶದ ಜನಸಾಮಾನ್ಯರನ್ನು ಮೋಸಗೊಳಿಸಿ ಅಧಿಕಾರ ಪಡೆದುಕೊಂಡಿದ್ದಾರೆ ಹೊರತು ಬೇರೆ ಏನು ಕೆಲಸ ಮಾಡಿದ್ದಾರೆ.
12 ವರ್ಷದಲ್ಲಿ ನೀವು ಮಾಡಿದ ಅಭಿವೃದ್ಧಿ ಯಾವುದು. ಅಭಿವೃದ್ಧಿ ಶೂನ್ಯ ಮೋದಿ ಸರ್ಕಾರ.ಕೇವಲ ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಾ ವೋಟ್ ಚೂರಿಯನ್ನು ಮಾಡಿ ಎಸ್ ಐ ಆರ್ ಹೆಸರಲ್ಲಿ ಮತದಾರರನ್ನು ಡಿಲೀಟ್ ಮಾಡಿ ಉತ್ತರದ ರಾಜ್ಯದಲ್ಲಿ ಗೆಲುವು ಸಾಧಿಸಿದ್ದ ನಿಮ್ಮ ಸಾಧನೆ ಅಷ್ಟೇ.? ಮುಂದಿನ ದಿನಗಳಲ್ಲಿ ಈ ಮೋಸಕ್ಕೆ ತಕ್ಕ ಉತ್ತರವನ್ನು ದೇಶದ ಜನತೆ ನೀಡಲಿದ್ದಾರೆ ದೇಶವನ್ನು ಲೂಟಿ ಮಾಡಿದಂತ ನಿಮಗೆ ಕಾಂಗ್ರೆಸ್ ಪಕ್ಷದ ಬಗ್ಗೆ ದೂಷಿಸುವ ನೈತಿಕತೆ ಇದೆಯಾ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಆದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಇವರು ಪ್ರಶ್ನಿಸಿರುತ್ತಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions