Advertisement

ಕಾರ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವು ಇಂದು ಕಾರ್ಕಳದ ಜಾಮಿಯಾ ಶಾದಿ ಮಹಲ್ ಹಾಲ್‌ನಲ್ಲಿ ನಡೆಯಿತು. ಮೌಲಾನಾ ಅಹಮ್ಮದ್ ಶರೀಶ್ ಸಹದಿ ದುವಾ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಕೆಲವು ಬಡಜನರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಫಾದರ್ ಲೂಯಿಸ್ ಡೇಸಾ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಕಾಂಗ್ರೆಸ್ ನಾಯಕರು ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಶೇಖರ್ ಮಡಿವಾಲ, ಮಂಜುನಾಥ ಪೂಜಾರಿ, ಶುಭದ ರಾವ್, ಶರ್ಫುದ್ದೀನ್ ಶೇಖ್, ಡಾ. ಶೇಖ್ ವಹೀದ್ ದಾವೂದ್, ಎಂ.ಪಿ. ಮೊಹಿದಿನಬ್ಬ, ಶೇಖ್ ಶಬ್ಬೀರ್ ಮಿಯಾರ್, ಮೊಹಮ್ಮದ್ ಗೌಸ್, ಮಹಮ್ಮದ್ ಅಶ್ಪಾಕ್, ಅಬ್ದಲ್, ರಹಮತ್ ಸಾಹೇಬ್ ಸೇರಿದಂತೆ ಅನೇಕ ಗಣ್ಯರು ಹಾಗೂ ವಿವಿಧ ಸಮುದಾಯಗಳ ನಾಯಕರು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions