ಉಡುಪಿ ಸಮೀಪದ ಕೆಮ್ಮಣ್ಣು ಲಿಟ್ಸ್ ಫ್ಲವರ್ ಹಾಲ್‌ನಲ್ಲಿ ಮೇ 8ರಿಂದ 10ರವರೆಗೆ ನಡೆಯಲಿರುವ ಹಲಸು ಮತ್ತು ಹಣ್ಣು ಮೇಳಕ್ಕೆ ಕೆಮ್ಮಣ್ಣು ಚರ್ಚ್ ಧರ್ಮಗುರು ಫಾ. ಪಿಲಿಪ್ ನರೆನ್ಹ ಚಾಲನೆ ನೀಡಿದರು.
ಮೇಳದಲ್ಲಿ ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ತಳಿಯ ಹಲಸುಗಳು ಪ್ರಮುಖ ಆಕರ್ಷಣೆಯಾಗಿವೆ. ಆಂಧ್ರಪ್ರದೇಶದಿಂದ ತರಿಸಲಾದ ವಿವಿಧ ತಳಿಯ ಹಲಸಿನ ಹಣ್ಣುಗಳೊಂದಿಗೆ ಹಲಸಿನ ಸಂಡಿಗೆ, ಹಪ್ಪಳ, ದೋಸೆ, ಹೋಳಿಗೆ, ಜಿಲೇಬಿ ಸೇರಿದಂತೆ ಹಲಸಿನ ವಿವಿಧ ಉತ್ಪನ್ನಗಳ ಮಾರಾಟ ನಡೆಯುತ್ತಿದೆ.
31ಕ್ಕೂ ಅಧಿಕ ಸ್ಟಾಲ್‌ಗಳನ್ನು ಹೊಂದಿರುವ ಮೇಳದಲ್ಲಿ ವಿವಿಧ ತಳಿಯ ಮಾವಿನಹಣ್ಣು, ಫ್ಯಾನ್ಸಿ ವಸ್ತುಗಳು, ಬಟ್ಟೆ ಹಾಗೂ ಇನ್ನಿತರ ಉತ್ಪನ್ನಗಳ ಮಾರಾಟವೂ ನಡೆಯಲಿದೆ. ಮಕ್ಕಳಿಗಾಗಿ ಸಂಜೆ ವೇಳೆಯಲ್ಲಿ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಮ್ಮಣ್ಣು ಚರ್ಚ್ ಆಡಳಿತಾಧಿಕಾರಿ ಥಾಮಸ್, ಮೇಳದ ಆಯೋಜಕ ಮುಹಮ್ಮದ್ ಮುಕ್ತಾರ್ ಹುಸೇನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions