ಉಡುಪಿ ಮಾರ್ಚ್ 26 (ಕ.ವಾ): ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಎಂ.ಸಿ.ಕೆ.ಎಸ್ ಫುಡ್ ಫಾರ್ ದಿ
ಹಂಗ್ರೀ ಫೌಂಡೇಶನ್ ವತಿಯಿಂದ 65 ಬಡ ರೋಗಿಗಳಿಗೆ ಆಹಾರ ಪಧಾರ್ಥಗಳ ಕಿಟ್ ಹಾಗೂ ಮಕ್ಕಳಿಗೆ ನೋಟ್ ಪುಸ್ತಕವನ್ನು
ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ್ ಮಾತನಾಡಿ, ಈ ತರಹದ ಕಾರ್ಯಕ್ರಮಗಳಿಂದ ಆಸ್ಪತ್ರೆಗೆ ಬರುವ
ಬಡ ರೋಗಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ದಾನಗಳಲ್ಲಿ ಶ್ರೇಷ್ಠದಾನ ಎಂದರೆ ರಕ್ತದಾನ ಎಂದು ಹೇಳಲಾಗುತ್ತದೆ. ಅದೇ
ರೀತಿ ಒಬ್ಬರಿಗೆ ಆಹಾರ ನೀಡುವುದು ಸಹ ಅತ್ಯಂತ ಮಹಾದಾನ ಎಂದರು.
ಎA.ಸಿ.ಕೆ.ಎಸ್ ಸಂಚಾಲಕಿ ನಿಧಿ ಮಾತನಾಡಿ, ಈ ಹಿಂದೆ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ಹಾಗೂ ಕ್ಷಯರೋಗಿಗಳಿಗೆ ಆಹಾರ
ಕಿಟ್ ವಿತರಿಸದ್ದು, ಅದೇ ರೀತಿ ಫೌಂಡೇಶನ್‌ನ ಸಂಸ್ಥಾಪಕರಾದ ಗ್ರ‍್ಯಾಂಡ್ ಮಾಸ್ಟರ್ ಚೋವಾ ಕೋಕ್ ಸುಯಿ ಇವರ
ಸವಿನೆನಪಿಗಾಗಿ ಇಂದು ಬಡ ರೋಗಿಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಎ.ಆರ್.ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಾಥ್, ಎ.ಆರ್.ಟಿ ಕೇಂದ್ರದ ಸಿಬ್ಬಂದಿಗಳು
ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆ ಆಪ್ತ ಸಮಾಲೋಚಕ ಮನು ಎಸ್.ಬಿ ನಿರೂಪಿಸಿ, ವಂದಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions