ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕಿನ ಅಂಗಸಂಸ್ಥೆ 'ಕೆನರಾ ರೋಬೆಕೊ' (Canara Robeco) ತನ್ನ ಸಿಎಸ್ಆರ್ (CSR) ನಿಧಿಯಡಿ ಕಟಪಾಡಿ ಎಸ್‌ವಿಎಸ್ ವಿದ್ಯಾಸಂಸ್ಥೆಗಳ 8ನೇ ತರಗತಿಯ ವಿದ್ಯಾರ್ಥಿಗಳಿಗೆ 100 ಸೈಕಲ್‌ಗಳನ್ನು ದೇಣಿಗೆಯಾಗಿ ನೀಡಿದೆ.
ಸೈಕಲ್ ಹಸ್ತಾಂತರಿಸಿ ಮಾತನಾಡಿದ ಕೆನರಾ ರೋಬೆಕೊ ಮಂಗಳೂರು ವಿಭಾಗದ ಸೀನಿಯರ್ ಮ್ಯಾನೇಜರ್ ನಿತೇಶ್ ಶೆಣೈ ಅವರು, "ಕೆನರಾ ರೋಬೆಕೊ ಸಂಸ್ಥೆಯು ತನ್ನ ಸಿಎಸ್ಆರ್ ನಿಧಿಯ ಮೂಲಕ ದೇಶದ ಲಕ್ಷಾಂತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಾ ಬಂದಿದೆ. 2026ನೇ ಸಾಲಿನಲ್ಲಿ ದೇಶಾದ್ಯಂತ 24,000 ಶಾಲೆಗಳಿಗೆ ಸೈಕಲ್ ವಿತರಿಸುವ ಸಂಕಲ್ಪ ಮಾಡಲಾಗಿದ್ದು, ಅದರ ಭಾಗವಾಗಿ ಕಟಪಾಡಿ ಎಸ್‌ವಿಎಸ್ ಶಾಲಾ ವಿದ್ಯಾರ್ಥಿಗಳಿಗೂ 100 ಸೈಕಲ್‌ಗಳನ್ನು ನೀಡಲಾಗುತ್ತಿದೆ. ಇದೊಂದು ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹವಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು" ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಟಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ತಿಲಕ್ ರಾಜ್ ಮಾತನಾಡಿ, "ಸರ್ಕಾರದಿಂದಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಮಾಜ ಒಂದಾಗಿ ಕೈಜೋಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಶಾಲೆಯ ಮತ್ತು ಗ್ರಾಮದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ" ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ದಾನಿಗಳಾದ ಶ್ರೀ ಶಿವ ಪಾಲ್ಚೂರು ಮತ್ತು ಶ್ರೀಮತಿ ಶ್ರೀ ಪಾಲ್ಚೂರು ದಂಪತಿಯನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಸತ್ಯೇಂದ್ರ ಪೈ, ಇನ್ವೆಂಜರ್ ಸಂಸ್ಥೆಯ ಟೆಕ್ನಾಲಜಿ ಮ್ಯಾ ನೆ ಜ ರ್ ನರಸಿಂಹ ಮಲ್ಯ ಮತ್ತು H R ಕೃತಿಕಾ, ವಿವೇಕಾನಂದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಮುಖ್ಯೋಪಾಧ್ಯಾಯಿನಿಯರಾದ ಆಶಾಲತಾ ಮತ್ತು ಸುಜಾ ಡಿಸೋಜ , ರಾಘವೇಂದ್ರ ಆಚಾರ್, ಬಿ. ಸಿ. ಪೈ, ವೆಂಕಟ್ರಮಣ ಭಟ್, ಗಣೇಶ್ ಕಿಣಿ, ದೇವೇಂದ್ರ ಸರ್ ಹಾಗೂ ಸುಧಾಕರ್ ಬಿ. ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions